Posts

ಒಹ್... ಪ್ರೇಮವೇ.....

ನನ್ನೊಲವ ಬಿಚ್ಚಿದುವೆ ನಿನ್ನೊಳಗೆ ಬಚ್ಚಿಡು ಮನಗಳ ನಡುವೆ ಸೇತುವೆ ನಿರ್ಮಿಸುವೆ ಬಂದು ಸಾಹಕರಿಸು ಓ ಪ್ರೇಮವೇ  ಅರ್ಪಿಸುವೆ ನನ್ನ ನಾನು ನಿನ್ನವನಗುವೆನು ಈಗ ನಾನು ಜೀವನದ ಜೊತೆಗಾರನಗುವೆನು  ನನ್ನತರಂಗವ ಅಲಂಕರಿಸು ಓ ಪ್ರೇಮವೇ  ನಿನ್ನ ನೋಟಕೆ ಅಭಿಮಾನಿಯಾಗಿರುವೆ ಇದೀಗ ನಾನು ನಿನ್ನ ಅನುರಾಗಿಯಾಗಿರುವೆ ನನ್ನೀ ಮನಸಿಗೆ ಯಜಮಾನಿಯಾಗಿರುವೆ ಮನಸೊಳಗೆ ದಯಪಾಲಿಸು ಓ ಪ್ರೇಮವೇ  ಮನಸೊಳಗೆ ಆಗಿದೆ ಸದ್ದಿಲ್ಲದ ಆಫಗತ ನಿನ್ನ ಮನದ ಜೊತೆ ನನ್ನ ಮನದ ಅಪಘಾತ  ಮನದ ಹಸಿಬಿಸಿ ಕನಸಲಿ ನಿನ್ನದೇ ಓಡಾಟ ಮಾತಲಿ ಹೇಳಲು ಮನಸಲಿ ಒದ್ದಾಟ ಒಹ್ ಪ್ರೇಮವೇ  -ಕಿಶನ್.ಬಿ.ಎನ್.

ಮನದಾಳದ ಪ್ರೇಮಕವಿತೆ

Image
ಮಾಯವ ಮಾಡಿ ನನ್ನಲ್ಲಿ ನಿನ್ನ ಗುಂಗನು ತುಂಬಿದೆ ಕಂಡೆನು   ಅಂದು   ನಾನು ನಿನ್ನ   ಮೊಗದ   ನಗುವನು ಕಳೆದು   ಹೋದೆ   ಇಂದು   ನಾನು ನೆನೆಯುತಾ   ನಿನ್ನನು   ನಿನ್ನ ನಗುವನಂದು ಕಂಡು   ಮೂಡಿತು ಒಂದು ಭಾವನೆ . ಕನಸು ಮನಸಲೂ ಈಗ ನಿನದೇ ಯೋಚನೆ ನನಗಿದೆ ಈಗ ನಿನ್ನ ನೋಡುವ ಕಾಮನೆ ಕಳೆದು ಹೋದೆ ಈಗ ನಾನು   ನೆನೆಯುತಾ ನಿನ್ನನೇ . ನಿನ್ನ   ಸನಿಹವ    ಮನವು   ಬಯಸುತಿದೆ ನಿನ್ನಿಂದಲೇ   ಪ್ರೇಮದ   ಹೂವು   ಅರಳುತಿದೆ ಪ್ರತಿಬಿಂಬವೂ ನಿನ್ನಯ ನಗುವ ನೆನಪಿಸಿದೆ ನಿನ್ನ   ಸೇರಲು   ಮನಸು   ಕಾಯುತಿದೆ .  ನಿನ್ನಲಿ ಹೇಳುವ ಮಾತು ನೂರಿದೆ ಅದನು ಹೇಳಲು ಮನವು ಕಾದಿದೆ ಹೃದಯ ಈಗ ನಿನ್ನನೇ ಕೇಳಿದೆ ನೊಂದಿದೆ ಈ   ಮನ ನೀನ್ನನು ಕಾಣದೆ .     -ಕಿಶನ್.ಬಿ.ಎನ್      

ಸ್ನ್ಯಾಪ್ ಚಾಟ್ ಗೆಳೆಯ ಭಾಗ-3

Image
ಸ್ನ್ಯಾಪ್ ಚಾಟ್ ಮುಖಾಂತರ ಅನನ್ನ್ಯ ಮತ್ತು ಆಕಾಶ್ ಪರಿಚಿತರಾಗುತ್ತಾರೆ. ಆಕಾಶ್ ನ ಕಾರಣದಿಂದಾಗಿ ಅನನ್ಯಾಳ ಜೀವನದಲ್ಲಿ ಒಂದಷ್ಟು ಬದಲಾವಣೆಗಳು ಆಗುತ್ತವೆ. ಇಷ್ಟೊಂದು ಬದಲಾವಣೆಗೆ ಕಾರಣರಾದ ಆಕಾಶ್ ನನ್ನು ಮಾತನಾಡುವ ಹಂಬಲ ಅನನ್ನ್ಯಾಳಿಗೆ ಆಗುತ್ತದೆ. ಆದರೆ ಅವಳಿಗೆ ಆಕಾಶ್ ನ ಬಳಿ ಮಾತನಾಡಲು ಸಾಧ್ಯವಗಲೇ ಇಲ್ಲ.  ನೀವು ಮೊದಲೆರಡು ಭಾಗಗಳನ್ನು ಓದಿಲ್ಲಾ ಎಂದಾದರೆ ಕಥೆಯ ಕೊನೆಗೆ ಎರಡೂ ಭಾಗದ ಲಿಂಕ್ ಇದೆ ಅದನ್ನು ಕ್ಲಿಕ್ಕಿಸುವ ಮುಖಾಂತರ ನೀವು ಅದನ್ನು ಓದಬಹುದು.   ಮುಂದೆ:   ಸಾಂದರ್ಭಿಕ ಚಿತ್ರ      ಕಾಲ ವಾಸಿಮಾಡದ   ಗಾಯ ಇಲ್ಲ ಎಂಬ ಮಾತಿದೆ . ಅದೇ ರೀತಿ ನನ್ನ ಮನಸ್ಸಲ್ಲಿ ಅವನ ನೆನಪು ಇದ್ದರೂ ಅವನಿಲ್ಲದೇ ಬದುಕುವುದನ್ನು ನಾನು ಹೇಗೋ ಕಲಿತೆ . ಎಂದಿನಂತೆ ದಿನಗಳು ಉರುಳುತ್ತಿತ್ತು. ಹೀಗಿರಬೇಕಾದರೆ ನಾನು ಏನೋ ಕೆಲಸಕ್ಕಾಗಿ ಮಂಗಳೂರಿಗೆ ಹೋಗಿದ್ದೆ .  ಹಾಗೇ ಇತ್ತ ಬರಬೇಕಾದರೆ ಅಲ್ಲಿನ ಮಾರುಕಟ್ಟೆಗೆ ಹೋಗಿದ್ದೆ. ಆಗ ಯಾರೋ ಹಿಂದಿನಿಂದ ಬಂದು ನನ್ನನ್ನು   ಕರೆದಂತೆ ಭಾಸವಾಯಿತು.   ಯಾರು ಎಂದು ಹಿಂತಿರುಗಿ ನೋಡಿದಾಗ ಲುಂಗಿ ಮತ್ತು ಟೀಶರ್ಟ್   ಧರಿಸಿದ ಉದ್ದನೆಯ ವ್ಯಕ್ತಿಯೊಬ್ಬ ಕುರುಚಲು   ಗಡ್ಡ ಹಾಗೂ ಮೀಸೆಯ ನಡುವಿನಿಂದ ನಗುತ್ತಾ ನಿಂತ್ತಿದ್ದ . ಅದು ಯಾರು ಎಂದು ನೋಡಿದಾಗ ಅವನು ಆಕಾಶ್ ಆಗಿದ್ದ . ಅಲ್ಲಿ ...

ಸ್ನ್ಯಾಪ್ಚಾಟ್ ಗೆಳೆಯ ಭಾಗ-2

Image
  ಮೊದಲ ಬಾಗದಲ್ಲಿ ಅನನ್ಯಾಳಿಗೆ ಆಕಾಶ್ ‌ ನ ಪರಿಚಯ ಸ್ನ್ಯಾಪ್ ಚಾಟ್ ನ ಮುಖಾಂತರ ಆಗುತ್ತದೆ . ಬಳಿಕ ಯಾರಲ್ಲೂ ಮಾತನಾಡದ ಅನನ್ಯ ಎಲ್ಲರೊಂದಿಗೆ ಬೆರೆಯಲು ಪ್ರಾರಂಭಿಸುತ್ತಾಳೆ . ಅವಳಿಗೆ ಆಕಾಶ್ ‌ ನ ಮೇಲೆ ಏನೋ ವಿಷೇಶವಾದ   ಸಂಬಂಧ   ಬೆಳೆಯಲು ಶುರುವಾಗುತ್ತದೆ . ಬಳಿಕ ಆತನೊಂದಿಗೆ ನೇರವಾಗಿ ಮಾತನಾಡುವ ಹಂಬಲ ಅವಳಿಗಾಗುತ್ತದೆ .  ಮುಂದೆ : ಮಂಗಳೂರಿನ ಕಂಕನಾಡಿ ಎಂದರೆ ನಮ್ಮ ಊರಿನಿಂದ ಸುಮಾರು 50 ಕಿ . ಮೀಟರ್ ದೂರದಲ್ಲಿ ಇರುವ ಊರು ಮತ್ತು ನಮ್ಮ ಜಿಲ್ಲಾ ಕೇಂದ್ರ . ಆಷ್ಟೊಂದು ದೂರವಿರು ವ  ಊರು ಅದಾದರೂ ನನ್ನ ಜೀವನದಲ್ಲಿ ಒಂದು ಬದಲಾವಣೆಗೆ ಕಾರಣರಾದ ಅವರನ್ನು ಕಂಡು ಮಾತನಾಡಿ ಬರಬೇಕು ಎಂದು ನಿರ್ಧರಿಸಿದೆ . ಇದಾದ 2 ದಿನಗಳ ಬಳಿಕ ನಾನು ನನ್ನ ಮಂಗಳೂರಿನ ಒಬ್ಬಳು ಗೆಳತಿಯ ಮನೆಗೆ ಹೋಗಿದ್ದೆ . ಅದಾಗಿ ಮನೆಗೆ ತೆರಳಬೇಕಾದರೆ ಆಕಾಶ್ ‌ ನ ಬಳಿ ಮಾತನಾಡಿ ಹೋಗೋಣ ಎಂದು   ಕಕಂನಾಡಿ ಆಸ್ಪತ್ರೆಗೆ ಹೋಗಿ ಅಲ್ಲಿ ರಿಸೆಪ್ಷನ್ ‌ ನ ಬಳಿ “ ಆಕಾಶ್ ಅವರು ಇದ್ದಾರಾ ?” ಎಂದು ಕೇಳಿದೆ . “ ನಿಲ್ಲಿ ಒಂದು ನಿಮಿಷ ” ಎಂದು ಕಂಪ್ಯೂಟರ್ ನಲ್ಲಿ ಏನೋ ನೋಡಿ “ ಅವರು ಈಷ್ಟೇ ಔಟ್ ಆದರು ಬಹುಷಹಾ ಪಾರ್ಕಿಂಗ್ ಲಾಟ್ ‌ ನಲ್ಲಿ ಇಬೇಕು ” ಎಂದು ಹೇಳಿದರು . ಅದನ್ನು ಕೇಳಿದ ತಕ್ಷಣ ನಾನು ಪರ್ಕಿಗ್ ಲಾ...